ಚಿಕ್ಕಮಗಳೂರು‌: ಕಾಡೆಮ್ಮೆ ಹೋಯ್ತು, ಕಾಡಾನೆ ಬಂತು..! | Oneindia Kannada

2018-07-19 202

ಚಿಕ್ಕಮಗಳೂರು‌, ಜುಲೈ.19: ಜಿಲ್ಲೆ‌ಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದ ಸಮೀಪ ವಾಟೆಕಾನ್ ಎಂಬಲ್ಲಿ ಆನೆ ಪ್ರತ್ಯಕ್ಷವಾಗಿದೆ. ಏಕಾಏಕಿ ಕಾಫಿತೋಟದಿಂದ ಗ್ರಾಮದ ರಸ್ತೆಗೆ ಆನೆ ನುಗ್ಗಿದ್ದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರವಿ ಎಂಬುವವರ ತೋಟಕ್ಕೆ ನುಗ್ಗಿದ ಆನೆ ಕೆಲಕಾಲ ಅಲ್ಲಿಯೇ ಘರ್ಜಿಸಿದ್ದು, ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಬೆಳಗ್ಗೆಯಿಂದ ಸಂಜೆವರೆಗೂ ಕಾಫಿ ತೋಟದಲ್ಲೇ ಬೀಡು ಬಿಟ್ಟಿದ್ದ ಕಾಡಾನೆ, ರಸ್ತೆ ದಾಟಿ ಕಾಫಿ ತೋಟದ ಒಳಗೆ ಪ್ರಯಾಣ ಮಾಡುವಾಗ ಗ್ರಾಮದ ಯುವಕರು ಗಜರಾಜನ ಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.